ಮುಖ್ಯಮಂತ್ರಿ ಕುಮಾರಸ್ವಾಮಿ ಅವರ ವ್ಯವಹಾರಗಳ ಆಡಿಟ್ ಮಾಡುವ, ಚಾರ್ಟೆಡ್ ಅಕೌಂಟೆಂಟ್ ಅವರ ನಿವಾಸದ ಮೇಲೆ ಐಟಿ ದಾಳಿ ನಡೆದಿದ್ದು, ಕುಮಾರಸ್ವಾಮಿ ಅವರ ಆಸ್ತಿಗೆ ಸಂಬಂಧಿಸಿದ ದಾಖಲೆಗಳನ್ನು ವಶಪಡಿಸಿಕೊಂಡಿದ್ದಾರೆ ಎನ್ನಲಾಗಿದೆ. ಕುಮಾರಸ್ವಾಮಿ ಅವರ ಲೆಕ್ಕಪತ್ರಗಳನ್ನು ನೋಡಿಕೊಳ್ಳುತ್ತಿದ್ದ ಎಚ್.ಬಿ.ಸುನಿಲ್ ಅವರ ಕುಮಾರಪಾರ್ಕ್‌ನಲ್ಲಿನ ಮನೆ ಮತ್ತು ನಿವಾಸದ ಮೇಲೆ ಇಂದು ಬೆಳಿಗ್ಗೆ ಐಟಿ ಅಧಿಕಾರಿಗಳು ದಾಳಿ ನಡೆಸಿ ಸತತ ಪರಿಶೀಲನೆ ನಡೆಸುತ್ತಿದ್ದಾರೆ. ಸುನೀಲ್, ಕುಮಾರ ಸ್ವಾಮಿ ಮಾತ್ರವಲ್ಲದೆ ಅವರ ಪತ್ನಿ, ಪುತ್ರರ ಲೆಕ್ಕಪತ್ರಗಳನ್ನೂ ನೋಡಿಕೊಳ್ಳುತ್ತಿದ್ದರು. ಇದು ಸುನೀಲ್ ಮನೆ ಮೇಲಿನ ಎರಡನೇ ದಾಳಿ ಆಗಿದ್ದು, ವಿಧಾನಸಭಾ ಚುನಾವಣಾ ಸಂದರ್ಭದಲ್ಲೂ ಐಟಿದಾಳಿ ನಡೆದಿತ್ತು.
IT officers on raid on charted accountant HB Sunil's house and office in Bengaluru. Sunil said to be maintaining CM Kumaraswamy and his families accounts.